History

Reddy Heritage – ರೆಡ್ಡಿ ಪರಂಪರೆಯ ಸೊಗಡು: ಮಣ್ಣಿನ ಸುಗಂಧದಿಂದ ಸಾಮ್ರಾಜ್ಯದ ಶಿಖರದ ವರೆಗೆ

Reddy Heritage : ರೆಡ್ಡಿ ಪರಂಪರೆಯ ವೈಭವ, ಚಾರಿತ್ರಿಕ ಸಾಮ್ರಾಜ್ಯಗಳು, ವೀರತ್ವ, ಕೃಷಿ ಮೂಲಗಳು, ಆಧ್ಯಾತ್ಮಿಕ ಮಹನೀಯರು ಮತ್ತು ಸಮಕಾಲೀನ ಸಾಧನೆಗಳ ಸಮಗ್ರ ಪರಿಚಯ. ರೆಡ್ಡಿ ಸಮಾಜದ ಇತಿಹಾಸ ಮತ್ತು ಗೌರವವನ್ನು ತಿಳಿಯಿರಿ…

‘ರೆಡ್ಡಿ’ ಎಂಬ ಪದ ಕೇಳಿದಾಗ ಮನಸ್ಸಿಗೆ ಮೂಡುವ ಚಿತ್ರಗಳು ವೀರತ್ವ, ಶೌರ್ಯ, ಆಡಳಿತ ನಿಪುಣತೆ ಮತ್ತು ಮಣ್ಣಿನ ನಂಟಿನ ಪ್ರತೀಕಗಳು. ದಕ್ಷಿಣ ಭಾರತದ ಸಾಮಾಜಿಕ-ಸಾಂಸ್ಕೃತಿಕ ಇತಿಹಾಸದಲ್ಲಿ ರೆಡ್ಡಿಗಳ ಹೆಜ್ಜೆಗುರುತುಗಳು ಅಚ್ಚಳಿಯದೆ ಉಳಿದಿವೆ.

ಕೃಷಿ ಮೂಲಾಧಾರವಾಗಿದ್ದರೂ ಆಡಳಿತ, ಯುದ್ಧ, ವ್ಯಾಪಾರ, ಧರ್ಮ, ಸಾಹಿತ್ಯ, ಸಮಾಜಸೇವೆ- ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿದ ಪರಂಪರೆ ರೆಡ್ಡಿಗಳದು.

ರೆಡ್ಡಿಗಳೆಂದರೆ ರಾಜರು; ರೆಡ್ಡಿಗಳೆಂದರೆ ವೀರರು; ರೆಡ್ಡಿಗಳೆಂದರೆ ಪರಾಕ್ರಮಿಗಳು ಎಂಬ ಮಾತು ಕೇವಲ ಕಾವ್ಯವಲ್ಲ, ಇತಿಹಾಸದ ಪುಟಗಳಲ್ಲಿ ಮೂಡಿರುವ ನಿಜಚಿತ್ರಣ!

ಇದನ್ನೂ ಓದಿ: Savadatti Reddy Kings History: ಕನ್ನಡ ನಾಡಿನ ಹೆಮ್ಮೆ ಸವದತ್ತಿ ರೆಡ್ಡಿರಾಜರ ಅಜರಾಮರ ಚರಿತ್ರೆ

ಮಣ್ಣಿನ ನಂಟು: ಕೃಷಿಯಿಂದ ರಾಜ್ಯಕಾರ್ಯದ ವರೆಗೆ

ರೆಡ್ಡಿಗಳ ಮೂಲವೇ ಕೃಷಿ. ಮಣ್ಣಿನ ಸುವಾಸನೆ, ಬೆಳೆಗಾರಿಕೆಯ ಅನುಭವ, ಪ್ರಕೃತಿಯೊಡನೆ ಹೊಂದಾಣಿಕೆ- ಇವುಗಳು ಅವರ ಬದುಕಿನ ತತ್ವ. ಆದರೆ ಅವರು ಕೃಷಿಕರಾಗಿ ಮಾತ್ರ ಸೀಮಿತವಾಗಿರಲಿಲ್ಲ. ಆಡಳಿತ, ಸೇನಾ ಕಾರ್ಯ, ವ್ಯಾಪಾರ, ಉದ್ಯಮ, ಸರ್ಕಾರಿ ಸೇವೆ, ರಾಜಕೀಯ ಮತ್ತು ಸಮಾಜಸೇವೆಯಲ್ಲಿ ತೊಡಗಿ, ಬಹುಮುಖ ಪ್ರತಿಭೆಯನ್ನು ತೋರಿಸಿದರು.

ಗ್ರಾಮೀಣ ವ್ಯವಸ್ಥೆಯಲ್ಲಿ ನಾಯಕತ್ವ ವಹಿಸಿ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ರೆಡ್ಡಿಗಳು ಸಮಾಜದ ನಂಬಿಕೆಗೆ ಪಾತ್ರರಾದರು. ಅವರಲ್ಲಿ ನಾಯಕತ್ವ, ಧೈರ್ಯ ಮತ್ತು ತ್ಯಾಗಭಾವನೆಗಳ ಸಮನ್ವಯ ಕಂಡುಬರುತ್ತದೆ.

 

ಇದನ್ನೂ ಓದಿ: 39 Reddikulu Shakhegalu- ದಾಖಲೆಗೆ ಸಿಕ್ಕ 39 ರೆಡ್ಡಿಕುಲ ಶಾಖೆಗಳು – ವೈವಿಧ್ಯತೆಯೊಳಗಿನ ಐತಿಹಾಸಿಕ ರೆಡ್ಡಿ ಪರಂಪರೆ

Reddy Heritage
Reddy Heritage

ಆಧ್ಯಾತ್ಮಿಕ ಪ್ರಭಾವ ಮತ್ತು ಸಾಂಸ್ಕೃತಿಕ ಕೀರ್ತಿ

ರೆಡ್ಡಿ ಪರಂಪರೆಯ ಸೊಬಗು ಕೇವಲ ಯುದ್ಧವೀರತ್ವದಲ್ಲಲ್ಲ; ಆಧ್ಯಾತ್ಮಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿಯೂ ಅದು ಹೊಳೆಯುತ್ತದೆ. ಮಹಾಯೋಗಿ ವೇಮನ ತಮ್ಮ ಸರಳವಾದ ಆದರೆ ಗಾಢವಾದ ವಚನಗಳ ಮೂಲಕ ಮಾನವ ಜೀವನದ ಮೌಲ್ಯಗಳನ್ನು ಸಾರಿದರು. ಅವರ ಕವನಗಳು ಸಮಾಜದ ಅಸಮಾನತೆ, ಅಜ್ಞಾನ ಮತ್ತು ಕಪಟದ ವಿರುದ್ಧ ತೀಕ್ಷ್ಣವಾದ ಚಾಟಿ ಬೀಸಿದವು.

ಅದೇ ರೀತಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಭಕ್ತಿ, ವೈರಾಗ್ಯ ಮತ್ತು ಧರ್ಮನಿಷ್ಠೆ ದಕ್ಷಿಣ ಭಾರತದ ಭಕ್ತಿಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಇವರಂತಹ ಮಹನೀಯರು ರೆಡ್ಡಿ ಪರಂಪರೆಯ ಆತ್ಮಸ್ಫೂರ್ತಿಯ ಪ್ರತೀಕಗಳು.

ಇದನ್ನೂ ಓದಿ: Kongunadu Reddy Kings- ದಕ್ಷಿಣ ಭಾರತದಲ್ಲಿಯೇ ಪ್ರಥಮ ಚಿನ್ನದ ನಾಣ್ಯ ಹೊರಡಿಸಿದ ಕೊಂಗನಾಡು ರೆಡ್ಡಿ ರಾಜರು

ಧರ್ಮಸಹಿಷ್ಣುತೆ ಮತ್ತು ಸಾಮಾಜಿಕ ಸೌಹಾರ್ದತೆ

ರೆಡ್ಡಿ ದೊರೆಗಳು ವಿಭಿನ್ನ ಧರ್ಮಗಳನ್ನು ಗೌರವಿಸಿ, ಧರ್ಮಸಹಿಷ್ಣುತೆಗೆ ಆದ್ಯತೆ ನೀಡಿದರು. ಅವರ ಆಡಳಿತದಲ್ಲಿ ದೇವಾಲಯಗಳ ಜೊತೆಗೆ ಇತರ ಧಾರ್ಮಿಕ ಸಂಸ್ಥೆಗಳಿಗೂ ಆಶ್ರಯ ಸಿಕ್ಕಿತು. ಇದು ಅವರ ವಿಶಾಲ ಮನೋಭಾವ ಮತ್ತು ಸಮನ್ವಯದ ಚಿಂತನೆಗೆ ಸಾಕ್ಷಿ.

ಸಮಾಜದ ಹಿತಾಸಕ್ತಿಯೇ ಅವರ ಗುರಿ. ಶಿಕ್ಷಣ, ದಾನಧರ್ಮ, ಹಬ್ಬ-ಜಾತ್ರೆಗಳ ಪ್ರೋತ್ಸಾಹ ಇವುಗಳ ಮೂಲಕ ಸಮಾಜದ ಏಕತೆಯನ್ನು ಬಲಪಡಿಸಿದರು.

ಇದನ್ನೂ ಓದಿ: Mahayogi Vemana Jeevana Sandesha – ಬದುಕು ಕಲಿಸುವ ಮಹಾಯೋಗಿ ಶ್ರೀ ವೇಮನರ ಜೀವನ ಸಂದೇಶ

ಸಮಕಾಲೀನ ಸಮಾಜದಲ್ಲಿ ರೆಡ್ಡಿಗಳ ಪಾತ್ರ

ಇಂದಿನ ಕಾಲಘಟ್ಟದಲ್ಲಿಯೂ ರೆಡ್ಡಿ ಸಮುದಾಯ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ. ರಾಜಕೀಯ, ಆಡಳಿತ, ಉದ್ಯಮ, ಶಿಕ್ಷಣ, ಆರೋಗ್ಯ, ಸಮಾಜಸೇವೆ- ಎಲ್ಲ ಕ್ಷೇತ್ರಗಳಲ್ಲಿಯೂ ರೆಡ್ಡಿಗಳು ತಮ್ಮದೇ ಆದ ಗುರುತನ್ನು ಉಳಿಸಿಕೊಂಡಿದ್ದಾರೆ.

ಗ್ರಾಮೀಣ ಮೂಲಗಳಿಂದ ಬಂದವರಾಗಿದ್ದರೂ ಜಾಗತಿಕ ವೇದಿಕೆಗಳಲ್ಲಿಯೂ ಸಾಧನೆ ಮಾಡುತ್ತಿರುವುದು ರೆಡ್ಡಿ ಪರಂಪರೆಯ ಸತತತೆಯ ಸೂಚಕವಾಗಿದೆ.

ಗ್ರಂಥ ರೂಪದಲ್ಲಿ ಪರಂಪರೆಯ ದಾಖಲಾತಿ

ರೆಡ್ಡಿಗಳ ಪೌರಾಣಿಕ ಐತಿಹ್ಯ, ಚಾರಿತ್ರಿಕ ದಾಖಲೆಗಳು ಹಾಗೂ ಸಮಕಾಲೀನ ಬೆಳವಣಿಗೆಗಳ ಸಮಗ್ರ ಚಿತ್ರಣವನ್ನು ಶ್ರೀ ಮೊ.ಮು.ಆಂಜನಪ್ಪ ರೆಡ್ಡಿ ಅವರ ‘ರೆಡ್ಡಿ ಪರಂಪರೆ’ ಗ್ರಂಥವು ಸಮಗ್ರವಾಗಿ ದಾಖಲಿಸಿದೆ.

Reddy Heritage
Reddy Heritage

ಈ ಕೃತಿ ಕೇವಲ ಇತಿಹಾಸದ ದಾಖಲಾತಿಯಲ್ಲ; ಅದು ಒಂದು ಸಮುದಾಯದ ಆತ್ಮಗೌರವದ ಪ್ರತಿಬಿಂಬ. ಈ ಗ್ರಂಥವು ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೆಡ್ಡಿ ಬಂಧುಗಳಿಗೆ ಅಧ್ಯಯನಯೋಗ್ಯವಾಗಿದ್ದು, ಪರಂಪರೆಯ ಅರಿವು ಮೂಡಿಸುವ ಮಹತ್ವದ ಕೃತಿ.

ಇದನ್ನೂ ಓದಿ: Sasive Chinnamma- ರೆಡ್ಡಿಕುಲ ಮಹಾಸಾಧ್ವಿ ಸಾಸಿವೆ ಚಿನ್ನಮ್ಮನ ಬಗ್ಗೆ ನಿಮಗೆಷ್ಟು ಗೊತ್ತು?

ರೆಡ್ಡಿ ಪರಂಪರೆ ಎಂದರೆ

ರೆಡ್ಡಿ ಪರಂಪರೆ ಎಂದರೆ ಕೇವಲ ಒಂದು ಸಮುದಾಯದ ಇತಿಹಾಸವಲ್ಲ; ಅದು ದಕ್ಷಿಣ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಯ ಅವಿಭಾಜ್ಯ ಅಂಗ. ಮಣ್ಣಿನ ಸೊಗಡು, ಶೌರ್ಯದ ಪ್ರತಾಪ, ಆಡಳಿತದ ನಿಪುಣತೆ, ಆಧ್ಯಾತ್ಮಿಕ ಮೌಲ್ಯಗಳು ಇವೆಲ್ಲವು ಸೇರಿ ರೆಡ್ಡಿ ಪರಂಪರೆಯ ವೈಭವವನ್ನು ಕಟ್ಟಿಕೊಟ್ಟಿವೆ.

ಇತಿಹಾಸವನ್ನು ಅರಿತುಕೊಳ್ಳುವುದು ಎಂದರೆ ನಮ್ಮ ಮೂಲಗಳನ್ನು ಅರಿಯುವುದು. ಆ ಮೂಲಗಳಲ್ಲಿ ರೆಡ್ಡಿ ಪರಂಪರೆ ಒಂದು ಪ್ರಕಾಶಮಾನ ಅಧ್ಯಾಯ. ಪ್ರತಿಯೊಬ್ಬ ರೆಡ್ಡಿ ಬಂಧುವೂ ಮಾತ್ರವಲ್ಲ, ಇತಿಹಾಸಾಸಕ್ತರೂ ಈ ಪರಂಪರೆಯನ್ನು ಅಧ್ಯಯನ ಮಾಡಬೇಕು. ಅದರೊಳಗೆ ಮಣ್ಣಿನ ಸೊಗಡು, ಮಾನವೀಯ ಮೌಲ್ಯ ಮತ್ತು ಶೌರ್ಯದ ಜ್ವಾಲೆ ಒಂದಾಗಿ ಹೊಳೆಯುತ್ತಿವೆ.

ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ

Glory of the Reddy kings of Kashmir – ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿರಾಜರ ಸುವರ್ಣ ವೈಭವ

Related Articles

Leave a Reply

Your email address will not be published. Required fields are marked *

Back to top button
error: Content is protected !!