
ಈಗಿನ ಕಲಬುರಗಿ ಜಿಲ್ಲೆಯ ಮಳಖೇಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕಾವೇರಿಯಿಂದ ಗೋದಾವರಿ ನಡುವಿನ ವಿಶಾಲ ಪ್ರದೇಶವನ್ನು ಸುದೀರ್ಘ ಎರಡೂವರೆ ಶತಮಾನಗಳ ಕಾಲ ಆಳಿದ ಕನ್ನಡಿಗ ದೊರೆಗಳಾದ ರಾಷ್ಟ್ರಕೂಟರ ಅನೇಕ ಶಾಸನಗಳಲ್ಲಿ ರಟ್ಟ ಪದ ಪ್ರಯೋಗವಾಗಿದೆ.
ರಾಷ್ಟ್ರಕೂಟರ ಹಲವು ತಾಮ್ರ ಶಾಸನಗಳಲ್ಲಿ ರಟ್ಟ ವಿಧ್ಯಾಧರ, ರಟ್ಟಗಂಧರ್ವ, ರಟ್ಟಕುಲಭೂಷಣ, ರಟ್ಟವಂಶೋದ್ಭವ ಮುಂತಾದ ಬಿರುದುಗಳಿತುವುದನ್ನು ರಾಷ್ಟ್ರಕೂಟ ದೊರೆಗಳು ದಾಖಲಿಸಿದ್ದಾರೆ. ರಟ್ಟವಂಶೋದ್ಭವ ಎಂದರೆ ರಟ್ಟಕುಲದಲ್ಲಿ ಉದ್ಭವಿಸಿದವರು ಅಥವಾ ಜನಿಸಿದವನು ಎಂದರ್ಥ.
ಅ೦ದರೆ ರಾಷ್ಟ್ರಕೂಟರು ರೆಡ್ಡಿಕುಲಸ್ಥರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ಏಕೆಂದರೆ ಪ್ರಾಚೀನ ಕಾಲದ ರಟ್ಟರೇ ಇಂದಿನ ರೆಡ್ಡಿಗಳು! ದ್ರಾವಿಡ ಮೂಲದ ರಾಷ್ಟ್ರಕೂಟವೇ ಕ್ರಮೇಣ ಸಂಸ್ಕೃತಿಕರಣಗೊ೦ಡು ರಡ್ಡ, ರಡ್ಡಿ ರೆಡ್ಡಿ ಎಂದಾಗಿ ರೂಪಾಂತರಗೊ೦ಡಿದೆ ಎಂಬುದು ಅನೇಕ ಭಾಷಾ ವಿದ್ವಾಂಸರ ಅಭಿಮತ.
ಲಭ್ಯವಿರುವ ಪುರಾವೆಗಳ ಪ್ರಕಾರ ಕನ್ನಡವನ್ನೇ ಆಡಳಿತ ಭಾಷೆ ಮಾಡಿಕೊಂಡು ರಾಜ್ಯಭಾರ ಮಾಡಿದ ರಾಷ್ಟ್ರಕೂಟರು ಅಪ್ಪಟ ಕನ್ನಡಿಗರೆ ಆಗಿರುವುದರಿಂದ ಸಮಸ್ತ ರೆಡ್ಡಿಕುಲದ ಮೂಲವೇ ಕರ್ನಾಟಕ..! ಅಂದರೆ ರೆಡ್ಡಿಗಳು ಅಪ್ಪಟ ಕನ್ನಡಿಗರು..!!
ಈ ಬಗ್ಗೆ ವಿವರವಾಗಿ ತಿಳಿಯಲು ಶ್ರೀ ಮೊ.ಮು.ಆಂಜನಪ್ಪ ರೆಡ್ಡಿಯವರ ‘ರೆಡ್ಡಿ ಪರಂಪರೆ’ ಗ್ರಂಥದಿAದ ಆಯ್ದ ನಿಖರ ಮಾಹಿತಿಯುಳ್ಳ ವಿಡಿಯೋ ಇಲ್ಲಿದೆ. ಮಿಸ್ ಮಾಡದೇ ಕೆಳಗಿನ ವಿಡಿಯೋ ನೋಡಿ… 👇👇👇