Historyವೇಮನ ಉಕ್ತಿ

Mahayogi Vemana Jeevana Sandesha – ಬದುಕು ಕಲಿಸುವ ಮಹಾಯೋಗಿ ಶ್ರೀ ವೇಮನರ ಜೀವನ ಸಂದೇಶ

Life Message of Vemana

‘ವೇಮನ’ ಅಂದೊಡನೇ ‘ಜೀವನ’ ಎಂದು ಉಸಿರುತ್ತದೆ ಒಳಮನಸ್ಸು. ಅಷ್ಟರ ಮಟ್ಟಿಗೆ ವೇಮನರ ಜೀವನ ಸಂದೇಶ (Mahayogi Vemana Jeevana Sandesha) ಸರ್ವಕಾಲಿಕವಾಗಿವೆ. ಅವರ ಜನ್ಮೋತ್ಸವದ ನಿಮಿತ್ತ ಪುಟ್ಟ ಅವಲೋಕ ಇಲ್ಲಿದೆ…

ನಮ್ಮೊಳಗಿನ ಛಲವನ್ನು ಜಾಗೃತಗೊಳಿಸಿ, ಸ್ವಾಭಿಮಾನದ ಬದುಕಿಗೆ ದಾರಿ ತೋರಿದ ಮಹಾನ್ ಚಿಂತಕ ಶ್ರೀ ವೇಮನರ ಜಯಂತಿಯನ್ನು ಪ್ರತಿ ಜನವರಿ 19ರ ಸುದಿನ (January 19 Vemana Jayanti) ನಾವು ಗೌರವದಿಂದ ಆಚರಿಸುತ್ತಿದ್ದೇವೆ. ವೇಮನರು ಕೇವಲ ಕವಿ ಅಥವಾ ತತ್ವಜ್ಞರಲ್ಲ; ಅವರು ಸಮಾಜದ ಅಂತರಾಳವನ್ನು ತಟ್ಟಿ ಎಚ್ಚರಿಸಿದ ಯೋಗಿ, ಸುಳ್ಳು, ಮೂಢನಂಬಿಕೆ, ಅನ್ಯಾಯಗಳ ವಿರುದ್ಧ ನೇರವಾಗಿ ಮಾತನಾಡಿದ ಮಹಾನುಭಾವರು.

ವೇಮನರ ಪ್ರತಿಯೊಂದು ನುಡಿ ನಮ್ಮ ಜೀವನಕ್ಕೆ ದಾರಿದೀಪದಂತೆ ಪ್ರಕಾಶಿಸುತ್ತದೆ. ಮಾನವೀಯ ಮೌಲ್ಯಗಳು, ಆತ್ಮಗೌರವ, ಸಮಾನತೆ ಮತ್ತು ಸಮಾಜಮುಖಿ ಚಿಂತನೆಗಳು ಅವರ ಪದ್ಯಗಳಲ್ಲಿ ಸಹಜವಾಗಿ ಹರಿದು ಬರುತ್ತವೆ. ಅಂತಹ ಮಹಾನ್ ಚಿಂತಕರ ಜಯಂತಿಯನ್ನು ಕರ್ನಾಟಕ ಸರ್ಕಾರವು ಕಳೆದ 2018ರ ಜನವರಿ 19ರಿಂದ ಅಧಿಕೃತವಾಗಿ ಆಚರಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಶ್ಲಾಘನೀಯ ಕ್ರಮವಾಗಿದೆ.

ಇದನ್ನೂ ಓದಿ: Manyakheta Rashtrakuta Capital History Neglect- ಹಾಳು ಕೊಂಪೆಯಾದ ರಾಷ್ಟ್ರಕೂಟರ ರಾಜಧಾನಿ | ವೈಭವದ ಮಾನ್ಯಖೇಟ ಈಗ ಅನೈತಿಕ ಚಟುವಟಿಕೆಗಳ ಕೂಪ!

ಒಗ್ಗಟ್ಟೇ ಬಲ – ವೇಮನರ ಸಂದೇಶದ ಸಾರ

‘ಒಗ್ಗಟ್ಟೇ ಬಲ’ ಎಂಬ ಮಾತಿಗೆ ಜೀವಂತ ಸಾಕ್ಷಿಯೇ ವೇಮನರ ಜೀವನ ಮತ್ತು ಚಿಂತನೆ. ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ನಂಬಿಕೆಯನ್ನು ಅವರು ತಮ್ಮ ತತ್ವಪದಗಳ ಮೂಲಕ ಜನಮನದಲ್ಲಿ ಬಿತ್ತಿದರು. ಸಾಧನೆಗೆ ಅಸಾಧ್ಯವೆಂಬುದೇ ಇಲ್ಲ; ಅಗತ್ಯವಿರುವುದು ಸಾಧಿಸುವ ಛಲ ಮತ್ತು ದೃಢ ಸಂಕಲ್ಪ ಎಂಬುವುದನ್ನು ವೇಮನರು ತಮ್ಮ ಜೀವನದ ಮೂಲಕ ಸಾರಿದರು.

ಪ್ರಾದೇಶಿಕತೆ, ಭಾಷೆ, ಜಾತಿ, ವರ್ಗಗಳ ಎಲ್ಲ ಗಡಿಗಳನ್ನು ಮೀರಿ ಸರ್ವ ಜನಾಂಗಕ್ಕೂ ಮಾದರಿಯಾದ ಯೋಗಿ ವೇಮನರ ತತ್ವಗಳು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಅವರು ಮಾನವತೆಯನ್ನು ಧರ್ಮವಾಗಿಸಿಕೊಂಡು, ಸತ್ಯ ಮತ್ತು ನ್ಯಾಯವನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡವರು.

Mahayogi Vemana Jeevana Sandesha
Mahayogi Vemana Jeevana Sandesha

ಇದನ್ನೂ ಓದಿ: Glory of the Reddy kings of Kashmir – ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿರಾಜರ ಸುವರ್ಣ ವೈಭವ

ಬಸವಣ್ಣನವರ ತತ್ವ ಮತ್ತು ವೇಮನರ ಚಿಂತನೆ

ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಲ್ಲಿ ವೇಮನರು ಅಪಾರ ನಂಬಿಕೆ ಇಟ್ಟಿದ್ದರು. ದುಡಿಯುವ ಶ್ರಮಕ್ಕೆ ಗೌರವ, ದುಡಿಯುವವನಿಗೆ ಘನತೆ ಎಂಬ ಮೌಲ್ಯಗಳನ್ನು ಅವರು ಸಮಾಜದ ಮಧ್ಯಕ್ಕೆ ತಂದರು.

ಸಮಾಜದಲ್ಲಿ ಕಂಡ ಅಸಮಾನತೆ, ದ್ವಂದ್ವ, ಅಂಧಶ್ರದ್ಧೆಗಳನ್ನು ಅವರು ಕಹಿಯಾದರೂ ಸತ್ಯಭರಿತವಾದ ಭಾಷೆಯಲ್ಲಿ ಹಾಡಿದರು. ಅವರ ತತ್ವಪದಗಳು ಕೇವಲ ಸಾಹಿತ್ಯವಲ್ಲ; ಅವು ಸಾಮಾಜಿಕ ಪರಿವರ್ತನೆಯ ಘೋಷಣೆಗಳು.

ಜನರಲ್ಲಿ ಅರಿವಿನ ಬೀಜ ಬಿತ್ತುವ ಉದ್ದೇಶದಿಂದಲೇ ವೇಮನರು ಸರಳ ಭಾಷೆಯಲ್ಲಿ ಗಂಭೀರ ಸತ್ಯಗಳನ್ನು ಹೇಳಿದವರು. ಅವರ ಪದ್ಯಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತೆ, ಮನಸ್ಸಿಗೆ ತಾಕುವಂತೆ ರಚಿಸಲ್ಪಟ್ಟವು.

ಇದನ್ನೂ ಓದಿ: End Caste Divisions Reddys Unity- ಪಂಗಡ ಬೇಧ ಬಿಡಿ ರೆಡ್ಡಿಕುಲವೊಂದೇ ಎಂಬ ಅಭಿಮಾನವಿಡಿ

ವೇಮನ ಅಧ್ಯಯನ ಮತ್ತು ಕರ್ನಾಟಕದ ಕೊಡುಗೆ

ವೇಮನರ ತತ್ವ-ಸಿದ್ಧಾಂತಗಳು ಸರ್ವ ಸಮುದಾಯಕ್ಕೂ ತಲುಪಲಿ ಎಂಬ ಉದ್ದೇಶದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಮಹಾಯೋಗಿ ವೇಮನ ಅಧ್ಯಯನ ಪೀಠ’ ಸ್ಥಾಪಿಸಿರುವುದು ಅತ್ಯಂತ ಮಹತ್ವದ ಹೆಜ್ಜೆ. ಈ ಪೀಠವು ವೇಮನ ಸಾಹಿತ್ಯದ ಪ್ರಕಟಣೆ, ಸಂಶೋಧನೆ ಹಾಗೂ ಪ್ರಚಾರದಲ್ಲಿ ವಿಶೇಷವಾದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.

ವೇಮನ ಸಾಹಿತ್ಯವನ್ನು ಕನ್ನಡಿಗರಿಗೆ ಮನೆ-ಮನೆಗೆ ಮುಟ್ಟಿಸುವಲ್ಲಿ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿದವರು ವೇಮನಪ್ರಿಯ ಹುಲಕೋಟಿಯ ದಿ. ಎಸ್.ಆರ್. ಪಾಟೀಲರು. ಅವರು ವೇಮನರ ಸುಮಾರು 4000 ವಚನಗಳನ್ನು ಸಂಗ್ರಹಿಸಿ, ಕನ್ನಡಕ್ಕೆ ಭಾಷಾಂತರಿಸಿ, ಅವುಗಳಿಗೆ ಟಿಪ್ಪಣಿ ಹಾಗೂ ವಿಮರ್ಶೆಗಳನ್ನು ನೀಡಿ, ವೇಮನ ಸಾಹಿತ್ಯ ಕನ್ನಡಿಗರಿಗೆ ಲಭ್ಯವಾಗುವಲ್ಲಿ ಅಪಾರ ಕೊಡುಗೆ ನೀಡಿದರು. ಅವರ ಈ ಸೇವೆ ಸದಾ ಸ್ಮರಣೀಯ.

Mahayogi Vemana Jeevana Sandesha
Mahayogi Vemana Jeevana Sandesha

ಇದನ್ನೂ ಓದಿ: Reddy Dynasty Rashtrakuta Empire- ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟರ ಭವ್ಯ ಚರಿತ್ರೆ

ವೇಮನ ಜಯಂತಿ ಸ್ಮರಣೆ ಮಾತ್ರವಲ್ಲ, ಸಂಕಲ್ಪ

ಜನವರಿ 19ರಂದು ವೇಮನರ ಜಯಂತಿಯನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಆಚರಿಸುವ ಮೂಲಕ ಮಹಾಯೋಗಿ ವೇಮನರಿಗೆ ಗೌರವ ಸಲ್ಲಿಸುತ್ತಿದೆ. ಜೊತೆಗೆ ಅವರ ಸಂದೇಶಗಳನ್ನು ಮರುಸ್ಮರಣೆ ಮಾಡುವ ಅವಕಾಶವನ್ನೂ ನೀಡುತ್ತಿದೆ.

ವೇಮನ ಜಯಂತಿ ಕೇವಲ ಆಚರಣೆಯಾಗದೆ, ಸಮಾಜದಲ್ಲಿ ಸಮಾನತೆ, ಶಾಂತಿ, ಸಹನೆ ಮತ್ತು ಮಾನವೀಯತೆಯನ್ನು ಉಳಿಸುವ ಸಂಕಲ್ಪದ ದಿನವಾಗಬೇಕು.

ಶುಭಾಶಯ ಮತ್ತು ಸಂದೇಶ

ಶ್ರೀ ವೇಮನರ ತತ್ವ-ಸಿದ್ಧಾಂತಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು, ಸ್ವಾಭಿಮಾನದಿಂದ ಕೂಡಿದ ನೆಮ್ಮದಿಯ ಬದುಕನ್ನು ಬಾಳೋಣ.

ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಸಮಾನತೆಯನ್ನು ಕಾಪಾಡುವ ಜವಾಬ್ದಾರಿಯನ್ನು ನಮ್ಮೆಲ್ಲರ ಮೇಲೆ ಹೊತ್ತುಕೊಂಡು, ವೇಮನರ ಚಿಂತನೆಗೆ ನಿಜವಾದ ಅರ್ಥ ನೀಡೋಣ.

ಮಹಾಯೋಗಿ ವೇಮನರ ಚಿಂತನೆಗಳು ಯುಗಯುಗಾಂತರಕ್ಕೂ ದಾರಿದೀಪವಾಗಲಿ. ನಾಡಿನ ಸಮಸ್ತ ಸಮಸ್ತ ಜನತೆಗೆ ಯೋಗಿ ವೇಮನ ಜಯಂತಿಯ ಹಾರ್ದಿಕ ಶುಭಾಶಯಗಳು…

ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ

MoMu Anjanappa Reddy Janapath- ಮೊ ಮು ಆಂಜನಪ್ಪ ರೆಡ್ಡಿಯವರ ಜನಪಥ | ಜನಸೇವೆಯ ಹಾದಿಯ ಪ್ರೇರಣಾದಾಯಕ ಕಥನ

Related Articles

Leave a Reply

Your email address will not be published. Required fields are marked *

Back to top button
error: Content is protected !!