ವೇಮನ ಉಕ್ತಿ
Vemana Neeti-ಕೊಟ್ಟು ಕೆಟ್ಟವರಿಲ್ಲ | ನೀಡಿದಷ್ಟೂ ಸಂಪತ್ತು ವೃದ್ಧಿಯಾಗುತ್ತದೆ…

ಮೂಲ ಪದ್ಯ:
ಕಲಿಗಿ ಪಟ್ಟಲೇನಿ ಕರ್ಮ ಜೀವುಲಕೆಲ್ಲ
ತಿರಿಪೆಮು ದೊರಕದಿಲ ದೀನುಲಾರ
ತೆಲಿಯ ಜೂಚು ಕೊನುಡಿ ದೃಷ್ಟಾಂತ ಮಾದಿ ಮಿಕು
ವಿಶ್ವದಾಭಿರಾಮ ವಿನುರ ವೇಮ
ಕನ್ನಡ ಅನುವಾದ:
ಇದ್ದು ನೀಡದಿರುವ ಕರ್ಮ ಜೀವಿಗಳಿಗೆ
ತಿರುಪೆ ಯದುವು ಸಿಗದು ದೀನ ಜನರೆ
ಪರಿಕಿಸಿ ತಿಳಿಯಿರೋ ದೃಷ್ಟಾಂತ ವಿದು ನಿಮಗೆ
ವಿಶ್ವದಾಭಿರಾಮ ಕೇಳು ವೇಮ
ತಾತ್ಪರ್ಯ:
ಸಕಲ ಐಶ್ವರ್ಯಗಳು ಇದ್ದೂ ಸಹ ಮನಃ ಪೂರ್ವಕವಾಗಿ ದೀನ ಜನರಿಗೆ ನೀಡದೆ ಹೋದರೆ ಅಂತಹ ಮಾನವರಿಗೆ ತಿರುಪೆಯೇ ಗತಿಯಾಗುತ್ತದೆ. ಬೇಡುವನಿಗೆ ಎರಡೂ ಕೈಯಿಂದ ನೀಡದಿದ್ದರೆ ನಾಳೆ ತಾನು ಕೂಡ ಬೇಡುವಂತಹ ಪಾಡು ತಂದು ಕೊಳ್ಳುತ್ತಾನೆ. ಪುರಾಣ, ಇತಿಹಾಸಗಳಲ್ಲಿ ಇಂತಹ ಹಲವಾರು ದೃಷ್ಣಾಂತ ಉದಾಹರಣೆಗಳಿವೆ. ಅವುಗಳನ್ನು ಅರಿತು ನೀಡುವ ಗುಣ ಕಲಿಯಬೇಕು. ಏಕೆಂದರೆ ನೀಡಿದಷ್ಟೂ ಸಂಪತ್ತು ವೃದ್ದಿಯಾಗುತ್ತದೆ. ಇನ್ನಷ್ಟು, ಮತ್ತಷ್ಟನ್ನು ನೀಡುವ ಶಕ್ತಿ ಬರುತ್ತದೆ. ಕೊಟ್ಟು ಕೆಟ್ಟವರು ಲೋಕದೊಳಗೆ ಯಾರೂ ಇಲ್ಲ.
ನೀತಿ: ಕೊಟ್ಟು ಕೆಟ್ಟವರಿಲ್ಲ
| ಮೊ ಮು ಆಂಜನಪ್ಪ ರೆಡ್ಡಿ