Reddy Dynasty Rashtrakuta Empire- ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟರ ಭವ್ಯ ಚರಿತ್ರೆ
Reddy Dynasty Rashtrakuta Empire History

ರೆಡ್ಡಿಕುಲ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟರು ಪ್ರಮುಖವಾದವರು. ಅಪ್ಪಟ ಕನ್ನಡಗರಾದ ಈ ಪ್ರಭುಗಳ ಇತಿಹಾಸ (Reddy Dynasty Rashtrakuta Empire) ರೋಮಾಂಚನಕಾರಿಯಾಗಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಚರಿತ್ರೆ ಕುರಿತ ವಿವರ ಮತ್ತು ವಿಡಿಯೋ ಇಲ್ಲಿದೆ…
ಭಾರತದ ಮಧ್ಯಯುಗೀನ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ವಂಶಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಪ್ರಮುಖವಾದುದು. ಇಂದಿನ ಕರ್ನಾಟಕದ ಕಲಬುರಗಿ ಜಿಲ್ಲೆಯ ಮಳಖೇಡ (ಮಾನ್ಯಖೇಟ)ವನ್ನು ರಾಜಧಾನಿಯಾಗಿಸಿಕೊಂಡಿದ್ದರು.
ಕಾವೇರಿ ನದಿಯಿಂದ ಗೋದಾವರಿ ನದಿ ವರೆಗೆ ಹರಡಿದ ವಿಶಾಲ ಪ್ರದೇಶವನ್ನು ಸುಮಾರು ಎರಡೂವರೆ ಶತಮಾನಗಳ ಕಾಲ (ಕ್ರಿ.ಶ. 753 ರಿಂದ 973ರ ವರೆಗೆ) ಆಳಿದ ಈ ಸಾಮ್ರಾಜ್ಯವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ, ಭಾಷಿಕ ಹಾಗೂ ಸಾಮಾಜಿಕವಾಗಿ ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಇದನ್ನೂ ಓದಿ: End Caste Divisions Reddys Unity- ಪಂಗಡ ಬೇಧ ಬಿಡಿ ರೆಡ್ಡಿಕುಲವೊಂದೇ ಎಂಬ ಅಭಿಮಾನವಿಡಿ
ರಾಷ್ಟ್ರಕೂಟರು ಅಪ್ಪಟ ಕನ್ನಡಿಗ ದೊರೆಗಳು
ಲಭ್ಯವಿರುವ ಶಾಸನಗಳು, ತಾಮ್ರಪತ್ರಗಳು ಮತ್ತು ಸಾಹಿತ್ಯಿಕ ಪುರಾವೆಗಳ ಆಧಾರದಲ್ಲಿ ನೋಡಿದರೆ, ರಾಷ್ಟ್ರಕೂಟರು ಆಡಳಿತ ಭಾಷೆಯಾಗಿ ಕನ್ನಡವನ್ನೇ ಬಳಸಿದ ಅಪ್ಪಟ ಕನ್ನಡಿಗ ದೊರೆಗಳಾಗಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ರಾಷ್ಟ್ರಕೂಟರ ಅನೇಕ ಶಾಸನಗಳು ಶುದ್ಧ ಕನ್ನಡದಲ್ಲಿಯೇ ರಚಿತವಾಗಿದೆ.
ಆಡಳಿತ, ದಾನ, ಭೂಮಿಯ ಮಂಜೂರಾತಿ ಮತ್ತು ರಾಜಕೀಯ ಆದೇಶಗಳು ಕನ್ನಡದಲ್ಲಿಯೇ ದಾಖಲಾಗಿವೆ. ಇದು ರಾಷ್ಟ್ರಕೂಟರು ಕೇವಲ ಕರ್ನಾಟಕದಲ್ಲಿ ಆಳಿದ ವಂಶವಲ್ಲ, ಕರ್ನಾಟಕದ ನೆಲಮೂಲದಿಂದಲೇ ಉದ್ಭವಿಸಿದ ದ್ರಾವಿಡ ಮೂಲದ ವಂಶವೆAಬುದನ್ನು ಸ್ಪಷ್ಟಪಡಿಸುತ್ತದೆ.

ಶಾಸನಗಳಲ್ಲಿ ಕಂಡುಬರುವ ‘ರಟ್ಟ’ ಪದದ ಮಹತ್ವ
ರಾಷ್ಟ್ರಕೂಟರ ಅನೇಕ ಶಾಸನಗಳಲ್ಲಿ ‘ರಟ್ಟ’ ಎಂಬ ಪದದ ನಿರಂತರ ಪ್ರಯೋಗ ಕಾಣಿಸಿಕೊಳ್ಳುವುದು ಅತ್ಯಂತ ಗಮನಾರ್ಹ ವಿಷಯ. ವಿಶೇಷವಾಗಿ ರಾಷ್ಟ್ರಕೂಟರ ತಾಮ್ರ ಶಾಸನಗಳಲ್ಲಿ ಕೆಳಗಿನಂತಹ ಬಿರುದುಗಳು ಸ್ಪಷ್ಟವಾಗಿ ಉಲ್ಲೇಖವಾಗಿವೆ:
- ರಟ್ಟ ವಿಧ್ಯಾಧರ
- ರಟ್ಟ ಗಂಧರ್ವ
- ರಟ್ಟ ಕುಲಭೂಷಣ
- ರಟ್ಟ ವಂಶೋದ್ಭವ
ಇವು ಕೇವಲ ಅಲಂಕಾರಿಕ ಬಿರುದುಗಳಲ್ಲ; ಅವು ರಾಷ್ಟ್ರಕೂಟರ ವಂಶಪಾರಂಪರ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ‘ರಟ್ಟವಂಶೋದ್ಭವ’ ಎಂಬ ಪದಕ್ಕೆ ಅರ್ಥವೇ – ರಟ್ಟಕುಲದಲ್ಲಿ ಜನಿಸಿದವನು ಅಥವಾ ಉದ್ಭವಿಸಿದವನು. ಅಂದರೆ ರಾಷ್ಟ್ರಕೂಟ ದೊರೆಗಳು ತಾವೇ ತಮ್ಮನ್ನು ‘ರಟ್ಟ’ ವಂಶದವರೆಂದು ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ: Reddykula Shakhegalu- ವೈವಿಧ್ಯತೆಯಲ್ಲಿ ಐಕ್ಯತೆ ಸಾರುವ ರೆಡ್ಡಿಕುಲ ಶಾಖೆಗಳು
ಅಂದಿನ ರಟ್ಟರೇ ಇಂದಿನ ರೆಡ್ಡಿಗಳು
ಇತಿಹಾಸ ಹಾಗೂ ಭಾಷಾ ಅಧ್ಯಯನಗಳ ಪ್ರಕಾರ ಪ್ರಾಚೀನ ಕಾಲದ ರಟ್ಟರೇ ಇಂದಿನ ರೆಡ್ಡಿಗಳು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಿವೆ. ದ್ರಾವಿಡ ಭಾಷಾ ಮೂಲದ ‘ರಟ್ಟ’ ಪದವು ಕಾಲಕ್ರಮೇಣ ಸಂಸ್ಕೃತೀಕರಣ ಮತ್ತು ಭಾಷಾ ರೂಪಾಂತರಗಳ ಪರಿಣಾಮವಾಗಿ:
- ರಟ್ಟ → ರಡ್ಡ → ರಡ್ಡಿ → ರೆಡ್ಡಿ
ಎಂಬ ರೂಪಾಂತರಗಳನ್ನು ಹೊಂದಿದೆ ಎಂದು ಅನೇಕ ಭಾಷಾ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದು ಭಾರತೀಯ ಭಾಷೆಗಳಲ್ಲಿನ ಸಹಜ ಧ್ವನಿಪರಿವರ್ತನೆಯ ಒಂದು ಉದಾಹರಣೆ ಮಾತ್ರವಲ್ಲದೆ, ಸಾಮಾಜಿಕ ವಂಶಪಾರಂಪರ್ಯವನ್ನು ಸೂಚಿಸುವ ಮಹತ್ವದ ಪುರಾವೆಯೂ ಹೌದು.
ರಾಷ್ಟ್ರಕೂಟರು ಮತ್ತು ರೆಡ್ಡಿಕುಲದ ಐತಿಹಾಸಿಕ ಸಂಬಂಧ
ರಾಷ್ಟ್ರಕೂಟರು ತಮ್ಮ ಶಾಸನಗಳಲ್ಲಿ ತಾವೇ ರಟ್ಟವಂಶೋದ್ಭವರೆಂದು ಹೇಳಿಕೊಂಡಿರುವುದರಿಂದ, ರಾಷ್ಟ್ರಕೂಟರು ರೆಡ್ಡಿಕುಲಸ್ಥರು ಎನ್ನುವುದಕ್ಕೆ ಇದಕ್ಕಿಂತ ಬಲವಾದ ಪುರಾವೆ ಬೇರೆ ಬೇಕಿಲ್ಲ. ಅಂದರೆ ರೆಡ್ಡಿಕುಲದ ಇತಿಹಾಸ ಕೇವಲ ಆಂಧ್ರ ಅಥವಾ ತೆಲಂಗಾಣಕ್ಕೆ ಸೀಮಿತವಾಗಿಲ್ಲ; ಅದರ ಮೂಲವೇ ಕರ್ನಾಟಕದ ನೆಲದಲ್ಲಿದೆ.
ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಿದ, ಕನ್ನಡ ಸಂಸ್ಕೃತಿಯನ್ನು ಪೋಷಿಸಿದ, ಕನ್ನಡ ಸಾಹಿತ್ಯಕ್ಕೆ ಬೆಂಬಲ ನೀಡಿದ ರಾಷ್ಟ್ರಕೂಟರು ಅಪ್ಪಟ ಕನ್ನಡಿಗರು ಎಂಬುದು ಸಾಬೀತಾದಾಗ, ರೆಡ್ಡಿಕುಲದ ಮೂಲವೂ ಕರ್ನಾಟಕದಲ್ಲಿಯೇ ಇದೆ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ.
ಇದನ್ನೂ ಓದಿ: Gonaganna Reddy- ಮಹಾ ಪರಾಕ್ರಮಿ ಗೋನಗನ್ನಾ ರೆಡ್ಡಿ | ಇದೋ ರಾಯಚೂರು ರೆಡ್ಡಿವೀರನ ಕಥನ

ರೆಡ್ಡಿಗಳು ಅಪ್ಪಟ ಕನ್ನಡಿಗರು
ಈ ಎಲ್ಲ ಪುರಾವೆಗಳ ಬೆಳಕಿನಲ್ಲಿ ನೋಡಿದರೆ, ಸಮಸ್ತ ರೆಡ್ಡಿಕುಲದ ಮೂಲ ಕರ್ನಾಟಕವೆಂಬುದು ಸ್ಪಷ್ಟವಾಗುತ್ತದೆ. ಅಂದರೆ ಐತಿಹಾಸಿಕವಾಗಿ ರೆಡ್ಡಿಗಳು ಮೂಲತಃ ಕನ್ನಡ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಕರ್ನಾಟಕದ ನೆಲಕ್ಕೆ ಸೇರಿದವರು. ಇದು ರೆಡ್ಡಿಕುಲದ ಹೆಮ್ಮೆಗೂ, ಕರ್ನಾಟಕದ ಇತಿಹಾಸಕ್ಕೂ ಹೊಸ ಆಯಾಮವನ್ನು ನೀಡುತ್ತದೆ.
ಇಂತಹ ಅನೇಕ ಅಚ್ಚರಿ ಹಾಗೂ ಗಂಭೀರ ಐತಿಹಾಸಿಕ ಸತ್ಯಗಳನ್ನು ಹೊರತರುತ್ತಿರುವ ಮಹತ್ವದ ಕೃತಿ ಎಂದರೆ ಶ್ರೀ ಮೊ. ಮು. ಆಂಜನಪ್ಪ ರೆಡ್ಡಿಯವರ ‘ರೆಡ್ಡಿ ಪರಂಪರೆ’. ಈ ಗ್ರಂಥವು ರೆಡ್ಡಿಕುಲದ ಮೂಲ, ವಂಶಾವಳಿ, ಸಂಸ್ಕೃತಿ ಮತ್ತು ರಾಷ್ಟ್ರಕೂಟರೊಡನೆಯ ಅವಿಭಾಜ್ಯ ಸಂಬಂಧವನ್ನು ಸಂಶೋಧನಾತ್ಮಕವಾಗಿ ವಿವರಿಸುತ್ತದೆ.
‘ರೆಡ್ಡಿ ಪರಂಪರೆ’ ಕೃತಿಯನ್ನು ಆಧಾರವಾಗಿಟ್ಟುಕೊಂಡು ರಚಿಸಲಾದ ರಾಷ್ಟ್ರಕೂಟರ ಭವ್ಯ ಚರಿತ್ರೆಯನ್ನು ಅಧ್ಯಯನ ಮಾಡುವುದರಿಂದ, ನಮ್ಮ ಇತಿಹಾಸದ ಬಗ್ಗೆ ಇರುವ ಅನೇಕ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಇದು ಕೇವಲ ಒಂದು ವಂಶದ ಕಥೆಯಲ್ಲ; ಇದು ಕನ್ನಡದ ನೆಲದಿಂದ ಹೊರಹೊಮ್ಮಿದ ಸಾಮ್ರಾಜ್ಯದ ಗರ್ವಭರಿತ ಇತಿಹಾಸ.
ಇದನ್ನೂ ಓದಿ: Reddy Mane Devaru- ರೆಡ್ಡಿಕುಲ ದೇವರುಗಳು | ರೆಡ್ಡಿಗಳ ಮನೆಯಲ್ಲಿ ಉಳಿದು ಬಂದಿರುವ ದೈವ ಪರಂಪರೆ
ಇತಿಹಾಸದ ಮಹತ್ವದ ಸತ್ಯ
ರಾಷ್ಟ್ರಕೂಟ ಸಾಮ್ರಾಜ್ಯವು ರಾಜಕೀಯ ಶಕ್ತಿ, ಸಾಂಸ್ಕೃತಿಕ ವೈಭವ ಮತ್ತು ಭಾಷಿಕ ಗರ್ವದ ಪ್ರತೀಕವಾಗಿತ್ತು. ಆ ಸಾಮ್ರಾಜ್ಯದ ಮೂಲ ರಟ್ಟ ವಂಶವಾಗಿದ್ದು, ಅದೇ ವಂಶವು ಇಂದಿನ ರೆಡ್ಡಿಕುಲವಾಗಿ ರೂಪಾಂತರಗೊಂಡಿರುವುದು ಇತಿಹಾಸದ ಮಹತ್ವದ ಸತ್ಯ. ಆದ್ದರಿಂದ ರೆಡ್ಡಿಕುಲದ ಹೆಮ್ಮೆ ರಾಷ್ಟ್ರಕೂಟರ ಭವ್ಯ ಚರಿತ್ರೆಯೊಂದಿಗೆ ಅವಿಭಾಜ್ಯವಾಗಿ ಜೋಡಿಸಿಕೊಂಡಿದೆ.
ಇಂತಹ ಐತಿಹಾಸಿಕ ಸತ್ಯಗಳನ್ನು ಅರಿತುಕೊಳ್ಳುವುದು, ಮುಂದಿನ ತಲೆಮಾರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ರಾಷ್ಟ್ರಕೂಟರ ಭವ್ಯ ಚರಿತ್ರೆಯನ್ನು ಈ ಕೆಳಗಿನ ವಿಡಿಯೋದಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ. ನೋಡಿ ಮತ್ತು ನಿಮ್ಮೆ ಸ್ನೇಹಿತರು, ಬಂಧುಗಳಿಗೆ ಶೇರ್ ಮಾಡಿ…
-
ಮೊ ಮು ಆಂಜನಪ್ಪ ರೆಡ್ಡಿ
ರಾಷ್ಟ್ರಕೂಟರ ಭವ್ಯ ಚರಿತ್ರೆ ವಿಡಿಯೋ ಲಿಂಕ್ 👇👇👇






One Comment