ವೇಮನ ಉಕ್ತಿ
Vemana Neeti-ನಾಲಿಗೆ, ಹೃದಯವನ್ನು ಅರಿತು ಸ್ನೇಹ ಮಾಡಬೇಕು | ಕೊಟ್ಟ ಮಾತು ತಪ್ಪಿದವನು ಅಭಿಮಾನ ಹೀನನು…

ಮೂಲ ಪದ್ಯ:
ಆಡಿ ತಪ್ಪುವಾಡೆ ಅಭಿಮಾನ ಹೀನುಡು
ಗೋಡೆರುಗನಿವಾಡು ಕೊದ್ದಿವಾಡು
ಕೂಡಿ ಕೀಡು ಚೇಯು ಕ್ರೂರುಂಡು ತಲಪೋಯ
ವಿಶ್ವದಾಭಿರಾಮ ವಿನುರ ವೇಮ
ಕನ್ನಡ ಅನುವಾದ:
ನುಡಿದು ತಪ್ಪುವವನು ಅಭಿಮಾನ ಹೀನನು
ದುಃಖ ವರಿಯ ದವನು ಅಲ್ಪ ನರನು
ಕೂಡಿ ಕೇಡು ಬಗೆಯೆ ಕ್ರೂರನವ ಯೋಚಿಸಲ್
ವಿಶ್ವದಾಭಿರಾಮ ಕೇಳು ವೇಮ
ತಾತ್ಪರ್ಯ:
‘ಮಾತಾಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು’ ಎಂಬ ಮಾತಿನಂತೆ ಮಾತಾಡುವಾಗಲೇ ಯೋಚಿಸಿ ಆಡಬೇಕು. ಮಾತು ಕೊಟ್ಟ ಮೇಲೆ ತಪ್ಪದಂತೆ ನಡೆಯಬೇಕು. ಕೊಟ್ಟ ಮಾತು ತಪ್ಪಿದವನು ಅಭಿಮಾನ ಹೀನನು. ಗೌರವಿಸಲು ಅನರ್ಹನು. ಹಾಗೆಯೇ ಪರರ ದುಃಖವನ್ನು ಅರಿಯದವನು, ಕಷ್ಟಕ್ಕೆ ಪ್ರತಿಯಾಗಿ ಸ್ಪಂದಿಸದವನು ಅಲ್ಪನರನು. ಅದೇ ಪ್ರಕಾರ ಜೊತೆಗಿದ್ದುಕೊಂಡೇ ದ್ರೋಹ ಬಗೆಯುವ ಮನುಷ್ಯ ಮಹಾಕ್ರೂರಿ. ಅಂಥವರ ಸಹವಾಸ ಮಾಡುವುದು ಅನಾಹುತವನ್ನು ಆಹ್ವಾನಿಸಿಕೊಂಡ೦ತೆ. ಅವರಿಂದ ದೂರವಿರುವುದೇ ಕ್ಷೇಮ. ನಾಲಿಗೆ-ಹೃದಯವನ್ನು ಅರಿತು ಸ್ನೇಹ ಮಾಡಬೇಕು.
ನೀತಿ: ನಾಲಿಗೆ-ಹೃದಯವನ್ನು ಅರಿತು ಸ್ನೇಹ ಮಾಡಬೇಕು
| ಮೊ ಮು ಆಂಜನಪ್ಪ ರೆಡ್ಡಿ