ವೇಮನ ಉಕ್ತಿ
Vemana Neeti : ಸ್ಥಾನವರಿತು ಮಾತನಾಡಲು ಅರಿತರೆ ಸಾಕು

ಮೂಲ ಪದ್ಯ:
ಅಂಕಿಲೆರಿಗಿ ಮಾಟಲಾಡ ನೇರ್ಚಿನ ಜಾಲು
ಪಿನ್ನ ಪೆದ್ದ ತನಮು ಲೆನ್ನ ನೇಲ
ಪಿನ್ನ ಚೇತಿ ದಿವ್ವೆ ಪೆದ್ದಗಾ ವೆಲುಗದಾ
ವಿಶ್ವದಾಭಿರಾಮ ವಿನುರ ವೇಮ
ಅನುವಾದ:
ಸ್ಥಾನವರಿತು ಮಾತನಾಡಲರಿತರೆ ಸಾಕು
ಕಿರಿಯ ಹಿರಿಯತನವ ಎಣಿಸಲೇಕೆ
ಕಿರಿಯನ ಕೈಸೊಡರು ಹಿರಿದಾಗಿ ಬೆಳಗದೇ
ವಿಶ್ವದಾಭಿರಾಮ ಕೇಳು ವೇಮ
ತಾತ್ಪರ್ಯ:
ಆಡುವ ಮಾತು ‘ಮಾಣಿಕ್ಯ’ ಅನ್ನಿಸಿಕೊಳ್ಳಬೇಕೆಂದರೆ ಇತರರ ಜೊತೆಯಲ್ಲಿ ಮಾತನಾಡುವಾಗ ಅವರ ಸ್ಥಾನ-ಮಾನಗಳನ್ನು ಅರಿತು ಮಾತನಾಡಬೇಕೇ ವಿನಃ ವ್ಯಕ್ತಿಯ ವಯಸ್ಸು, ಹಿರಿ-ಕಿರಿತನವನ್ನು ಪರಿಗಣಿಸಿ ಅಲ್ಲ. ಘನತೆಗೆ ಹಿರಿಯವನು ಕಿರಿಯವನು ಎಂಬ ಭೇದವಿಲ್ಲ. ಕೈ ಸೊಡರು ಅಂದರೆ ಕೈ ದೀಪ ಕಿರಿಯನ ಕೈಲ್ಲಿದ್ದರೂ ಅಷ್ಟೆ, ಹಿರಿಯನ ಕೈಯಲ್ಲಿದ್ದರೂ ಅಷ್ಟೆ. ಒಂದೇ ಗತಿಯಲ್ಲಿ ಉರಿಯುತ್ತದೆ. ಅದರ ಪ್ರಕಾಶಮಾನದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಂತೆಯೇ ವ್ಯಕ್ತಿಯ ಘನತೆ. ವಯಸ್ಸಿಗಿಂತ ಯೋಗ್ಯತೆಯೆ ಪ್ರಧಾನ.
ನೀತಿ: ವಯಸ್ಸಿಗಿಂತ ವ್ಯಕ್ತಿಯ ಗುಣ ಮುಖ
| ಮೊ ಮು ಆಂಜನಪ್ಪ ರೆಡ್ಡಿ