
ಮೂಲ ಪದ್ಯ:
ಕಲ್ಲು ಕಿಚ್ಚುನುಟ್ಲು ಚಲ್ಲಕಿಯ್ಯಗಲೇರು
ಕೊಲ್ಲ ಕಿಚ್ಚು ನ ಟಲ ಗುರುವು ಕಿಯರು
ಬುಯ್ಯಿ ಕಿಚ್ಚು ನಟ್ಲು ಪುಣ್ಯಾನಿಕಿಯ್ಯರು
ವಿಶ್ವದಾಭಿರಾಮ ವಿನುರ ವೇಮ
ಕನ್ನಡ ಅನುವಾದ:
ಮದ್ಯಕೆ ಕೊಡುವಂತೆ ಮಜ್ಜಿಗೆಗೆ ಕೊಡರು
ಜಾರೆಗೆ ಕೊಡುವಂತೆ ಗುರುವು ಗಿಲ್ಲ
ದಂಡಕೆ ಕೊಡುವಂತೆ ಪುಣ್ಯಕೆನೆ ಕೊಡರು
ವಿಶ್ವದಾಭಿರಾಮ ಕೇಳು ವೇಮ
ತಾತ್ಪರ್ಯ:
ಆರೋಗ್ಯಕ್ಕೆ ಮಾರಕವಾದ ಹೆಂಡಕ್ಕೆ ಹಣ ಕೊಡುವಷ್ಟು ಪ್ರೀತಿಯಿಂದ ಆರೋಗ್ಯಕ್ಕೆ ಪೂರಕವಾದ ಮಜ್ಜಿಗೆಗೆ ಹಣ ಕೊಡುವುದಿಲ್ಲ. ಅದೇ ರೀತಿ ಕ್ಷಣಿಕ ಸುಖ ನೀಡುವ ಜಾರೆಗೆ (ವೇಶ್ಯೆ) ಧಾರೆ ಎರೆಯುವ ಹಾಗೆ ಬದುಕಿನ ಗುರಿ ತೋರಿಸುವ ಗುರುವಿಗೆ ನೀಡುವುದಿಲ್ಲ. ಇಂತಹ ಹುಚ್ಚಾಟಗಳಿಗೆ ನಿರಂತರ ದಂಡ ತೇರುತ್ತಿರುತ್ತಾರೆ. ಬುದ್ದಿ ಕಲಿಯುವುದಿಲ್ಲ. ಆದರೆ ಅದನ್ನೇ ಪುಣ್ಯ ಸಂಪಾದನೆಯ ದೃಷ್ಟಿಯಿಂದ ಸತ್ಕಾರ್ಯಗಳಿಗೆ ಖರ್ಚು ಮಾಡುವುದಿಲ್ಲ. ಕೆಟ್ಟದ್ದನ್ನೆ ಹುಡುಕಿ ಹುಡುಕಿ ಪಡೆಯಲು ಕಾತರಿಸುತ್ತಾರೆ. ಮನುಷ್ಯರ ಬುದ್ದಿಯೇ ವಿಚಿತ್ರ.
ನೀತಿ: ಒಳ್ಳೆಯದು ಕೆಟ್ಟದ್ದು ಅರಿತು ಖರ್ಚು ಮಾಡಬೇಕು
| ಮೊ ಮು ಆಂಜನಪ್ಪ ರೆಡ್ಡಿ