ವೇಮನ ಉಕ್ತಿ
Vemana Neeti-ಕಷ್ಟಕ್ಕೆ ನೆರವಾದವರನ್ನು ಮರೆಯಬಾರದು | ಕಷ್ಟ ಕಾಲದಲ್ಲಿ ಮಾಡಿದ ಉಪಕಾರ ಜರಿಯುವುದು ಅಪರಾಧ

ಮೂಲ ಪದ್ಯ:
ಉಪಕಾರಿಕಿ ನಪಕಾರಮು
ನೆಪಮೆನ್ನುಚು ಚೇಯರಾದು ನೇರ್ಪರಿ ಯೈನನ್
ಅಪಕಾರಿಕಿ ನುಪಕಾರಮು
ಕೃಪತೋ ಸೇಯಂಗ ವಲಮು ಗುಣನಿಧಿ ವೇಮಾ
ಕನ್ನಡ ಅನುವಾದ:
ಉಪಕಾರಿಗೆ ಅಪಕಾರವ
ನೆಪಹುಡುಕುತ ಮಾಡೆಸಲ್ಲ ಅರಿತವ ನಿರಲು
ಅಪಕಾರಿಗೆ ಉಪಕಾರವ
ಕೃಪೆಯಿಂದ ಮಾಡಲುಬೇಕು ಗುಣ ನಿಧಿ ವೇಮ
ತಾತ್ಪರ್ಯ:
ಕಷ್ಟಕಾಲದಲ್ಲಿ ಹೃದಯ ಪೂರ್ವಕವಾಗಿ ಸಹಾಯ ಮಾಡಿದವರಿಗೆ ಇಲ್ಲಸಲ್ಲದ ಕುಂಟು ನೆಪಗಳನ್ನು ಹುಡುಕಿ ಅಪಕಾರ ಎಸಗುವುದು ಅಕ್ಷಮ್ಯ. ಅಥವಾ ಕಷ್ಟ ಕಾಲದಲ್ಲಿ ಮಾಡಿದ ಉಪಕಾರವನ್ನು ಸುಖ ಬಂದ ಕಾಲಕ್ಕೆ ಜರಿಯುವುದು, ಕೇವಲವಾಗಿ ಹಂಗಿಸುವುದೂ ಕೂಡ ಅಷ್ಟೆ ಅಕ್ಷಮ್ಯ ಅಪರಾಧ. ಬದಲಾಗಿ ಕಷ್ಟಕಾಲದಲ್ಲಿ ಅಪಕಾರ ಮಾಡಿದರೂ ಕೂಡ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಇಚ್ಚಾಪೂರ್ವಕವಾಗಿ ಸಹಾಯ ಮಾಡುವುದೇ ನಿಜವಾದ ಧರ್ಮ. ಅಂಥವರ ಗುಣ ಬಂಗಾರದ ನಿಧಿ. ಅವರು ಎಲ್ಲಿದ್ದರೂ ಶೋಭಿಸುತ್ತಾರೆ.
ನೀತಿ: ಕಷ್ಟಕ್ಕೆ ನೆರವಾದವರನ್ನು ಮರೆಯಬಾರದು
| ಮೊ ಮು ಆಂಜನಪ್ಪ ರೆಡ್ಡಿ